ಸೋಮವಾರ, ಜೂನ್ 10, 2013

ತಳಮಳಿಸುತ್ತಿದೆ ಮನವೇಕೋ
ತಿಳಿಯದು ಕಾರಣ
ಕಾರಣವಿಲ್ಲದ  ಬೇಸರ

ಬತ್ತಿದೆ  ಮೋಹಕ ವದನ
ಭಾರವಾಗಿದೆ ಉಸಿರು ...
ಬೇಕೆನಿಸಿದೆ ನಿನ್ನ ಸಂಗ
ಗೆಳೆಯಾ
ಬರಲಾರೆಯಾ  ನೀ ಬಲುಬೇಗ ...

ಬುಧವಾರ, ಜನವರಿ 2, 2013


ಮೊದಲ ಬರಹ 

ಕಥೆ ಬರೆಯಲೆಂದು ಹೊರಟೆ ಒಂದು ದಿನ
ಕವನ ಬರೆಯಬೇಕೆನಿಸಿತು ಆ ಕ್ಷಣ
ಕವನ ಬರೆಯಲೆಂದು ಕುಳಿತೆ ತಕ್ಷಣ
ಕೈ ನಡುಗತೊಡಗಿತು  ಪ್ರತಿಕ್ಷಣ
ಚುಟುಕು ಲೇಸೆನಿಸಿತು ಮರುಕ್ಷಣ
ಹೇಗೆ ಬರೆಯುವುದೆಂದು ಯೋಚಿಸಿದೆ ಕೆಲಕ್ಷಣ
.................................................
..............................
...................
ಯಾವುದೂ ಬೇಡವೆನಿಸಿತು ಕೊನೆಗೆ
ಪುಸ್ತಕ ಕೆಳಗಿಟ್ಟು ಹೊರಟೆ ಹೊರಗೆ
ಯಾರಾದರೂ  ಸಲಹೆ ನೀಡುವಿರಾ  ಎನಗೆ ....
- ಮಂಜುಳಾ ರವೀಶ್

 

ಮಂಗಳವಾರ, ಜನವರಿ 1, 2013

ಬಾಲ್ಯ 

 



ಮಾಸಿಲ್ಲ ನನ್ನಲ್ಲಿನ್ನೂ ಆ ನೆನಪು
ಬತ್ತಿಲ್ಲ ನನ್ನಲ್ಲಿನ್ನೂ ಆ ಹುರುಪು
ಗೋಲಿ ಲಗೋರಿ ಚಿನ್ನಿದಾಂಡು
ನಮ್ಮದೇ ಒಂದು ದೊಡ್ಡ ದಂಡು
ಕೆಲವೊಮ್ಮೆ ಗೆಲ್ಲಲು ಮಾಡುತ್ತಿದ್ದೆವು ಮೋಸ
ಆದರು ಸಂಜೆ ಒಟ್ಟಿಗೇ ತಿನ್ನುತ್ತಿದ್ದೆವು ಸಮೋಸ
ಹೆಣ್ಣು ಗಂಡೆಂಬ ಭೇದವಿರಲಿಲ್ಲ
ಜಗತ್ತಿನ ಪರಿವೆಯೂ ನಮಗಿರಲಿಲ್ಲ
ಈಗಲೂ ಹಾಗೆಯೇ ಇರಬೇಕೆಂಬುದು ನನ್ನಾಸೆ
ಗೆಳೆಯರ ಅನಿಸಿಕೆ ಇದು ನನ್ನ ದುರಾಸೆ
ಮರುಕಳಿಸಬಾರದೇ ಆ ಸುಂದರ ಬಾಲ್ಯ
ಮರಳಿ ಬರಬಾರದೇ ನನ್ನ ಗೆಳೆಯರ ಬಳಗ
ಮಾಸಿಲ್ಲ ನನ್ನಲ್ಲಿನ್ನೂ ಆ ನೆನಪು
ಬತ್ತಿಲ್ಲ ನನ್ನಲ್ಲಿನ್ನೂ ಆ ಹುರುಪು

-- ಮಂಜುಳಾ ರವೀಶ್


NAANU NANNA KANASU...HOSA PRAYATNADATTA HEJJE ...